ಕುಸುಮ
ಕುಸುಮವೇ ನೀನ್ಯಾರಿಗೆ ಸ್ವಂತ
ನಿನಗೆ ನೀರು ಹಾಕಿ ಬೆಳೆಸಿದ ಮಾಲೀಕನಿಗಾ ?
ನಿನ್ನ ಜನನಕ್ಕೆ ಕಾರಣವಾದ ಗಿಡಕ್ಕಾ ?
ನಿನ್ನಲ್ಲಿ ಮಕರಂದ ಕುಡಿದು ಹೋದ ದುoಬಿಗಾ ?
ನಿನ್ನನ್ನು ಕಿತ್ತುವ ಕೈಯಿಗಾ ?
ನೀ ಸೇರುವ ದೇವರ ಪಾದಕ್ಕಾ ?
ನಿನ್ನ ಮುಡಿಯುವ ಕನ್ಯೆಯ ಜಡೆಗಾ ?
ನಿನ್ನ ಮೇಲೆ ಕವನ ಬರೆದ ನನಗಾ ?
ಕೊನೆಗೂ ಬಾಡಿಹೋದ ನಿನ್ನನ್ನು
ತನ್ನಲ್ಲಿರಿಸುವ ಭೂ ತಾಯಿಯ ಮಡಿಲಿಗಾ ?
- ಚುಕ್ಕಿ
28 Feb 2017, 06:59 pm
Download App from Playstore: