ಎಲ್ಲಿಂದಲೋ ಬಂದಿರುವೆ
ಎಲ್ಲಿಂದಲೋ ಬಂದಿರುವೆ,
ಎಲ್ಲಿಗ್ಹೋಗಬೇಕೆನ್ನುವ ಅರಿವಿಲ್ಲ ಪರಿವಿಲ್ಲ..
ಓಡುತಲಿರುವೆ ಹುಚ್ಚು ಬಿಸಿಲ್ಗುದುರೆಯ ಬೆನ್ನ ಹತ್ತಿ...
ಒಂದು ಕ್ಷಣ ಓಡಿದ್ದು ಸಾಕೆನಿಸುವುದು,
ಮರು ಕ್ಷಣವೇ ನೂರು ಮೈಲಿಯ ವೇಗ...
ಸುಳ್ಳು ಸತ್ಯಗಳ ಪಯಣವೋ?
ಸರಿ ತಪ್ಪು ಲೆಖ್ಖಗಳ ಸರಮಾಲೆಯೋ?
ಪ್ರೀತಿ ಪ್ರಣಯಗಳ ಸಾರವೋ?
ಕಳ್ಳು ಬಳ್ಳಿ ಸಂಬಂಧಗಳ ಸಾಮರಸ್ಯದಲೆಯೋ?
ಅರಿಯೆ ನಾನು... ಆರಿಯಲೂ ನಾನಾರು?
ಎಲ್ಲಿಂದಲೋ ಬಂದಿರುವೆ
ಬದುಕು ಪೆಟ್ಟಿಗೆಯ ನಿಜ ಕೀಲಿಯ ಕಳೆದುಕೊಂಡವ ನಾನು...
ಕಡು ಕತ್ತಲ ಸಾಮ್ರಾಜ್ಯದಧಿಪತಿಯ ಕಬಂಧದ ಹುಲು ಕೈದಿ ನಾನು...
ಚಿತ್ತವಿಲ್ಲ, ಚಲನೆಯಿಲ್ಲ, ಎಲ್ಲಿಗೋ ಹೊರಟಿರುವೆ..
ಬಹುಷ: ದಿಗಂತದಂಚಿನೂರಿನವನಿರಬೇಕು ನಾನು
ಅದನ್ಹುಡುಕುತಿರುವ ಅಲೆಮಾರಿ ನಾನು
ಎಲ್ಲಿಂದಲೋ ಬಂದಿರುವೆ
- kiran
01 Mar 2017, 11:28 pm
Download App from Playstore: