ಓ ಅಮೃತ ಗಂಗೆ...
ಸುಡುವ ಬೇಸಿಗೆಯಲಿ ತಂಗಾಳಿಯ ತಂಪಂತೆ ನೀನು
ಬೆಂದು ಬಸವಳಿದ ಬಡಜೀವಕೆ ಅಮೃತದ ಜಲದಂತೆ ನೀನು
ಜಗನೋಡದೆ ಕುಳಿತಿರುವ ನನಗೆ ಕಣ್ಣಂತೆ ನೀನು
ದುಃಖಿತ ಜೀವನದ ಕ್ಷಣ ತೊರೆಯುವ ಆನಂದ ಚಿಲುಮೆಯಂತೆ ನೀನು
ಹಾಡಲಾಗದೆ ಕುಳಿತಿರುವ ಕೋಗಿಲೆಯ ಧ್ವನಿ ಸ್ಪೂರ್ತಿ ನೀನು
ಕಾನನದ ಸೌಂದರ್ಯಕ್ಕೆ ಹಸಿರು ಸೀರೆಯಂತೆ ನೀನು
ಸಪ್ತಸ್ವರ ನುಡಿಗಳ ನಾದವಿನೋದ ಆಲಾಪದಂತೆ ನಿನ್ನ ನುಡಿಗಳು
ನನ್ನ ಬದುಕಿನ ಕಥೆಯಲಿ ಬಂದ ನನ್ನ ಜೀವನ ಜ್ಯೋತಿಯು ನೀನು....
- Irayya Mathad
06 Mar 2017, 06:30 am
Download App from Playstore: