ಏನು ವ್ಯತ್ಯಾಸ ಹೇಳು.....

ಏನು ವ್ಯತ್ಯಾಸ ಹೇಳು ನೀ ....
ನಿನಗೂ, ನನ್ನ ಉಸಿರಿಗೂ...
ಬದುಕಲಾರೆ ಎರಡೂ ಇಲ್ಲದೆ.

ಏನು ವ್ಯತ್ಯಾಸ ಹೇಳು ನೀ
ನನ್ನ ಈ ರಕ್ತಕು, ನೀ ಕೋಟ್ಟ ನಿನ್ಯೆದೆಯಾ ಜೀವಾಮೃತಕು
ಜೀವವಿದು ನಿನ್ನ ಭೀಕ್ಷೆ ಅಲವೇ.

ಮೂರ್ಖ ನಾ ನಿನ್ನ ಪ್ರೀತಿಯ
ಪದಗಳಲ್ಲಿ ಅಳೆಯುವ
ವ್ಯರ್ಥ ಪ್ರಯತ್ನದಲ್ಲಿ.

ಅಳೆಯುವ ಪ್ರೀತಿ ನಿನ್ನದಲ್ಲ
ಮರೆವ ಜೀವ ನೀನಲ್ಲಾ
ಬದುಕ ಸವೆಸಿ, ನನ್ನ ಸಾಕಿ ಸಲುಗಿದ
ತಾಯಿ ನಿನಗಿಂತ ದೇವರಿಲ್ಲ.

- MK Reddy

06 Mar 2017, 10:00 am
Download App from Playstore: