ಹರೆಯದ ಅವಾಂತರ
ಹದ್ದು ಮೀರಿದೆ ಹರೆಯದ ಅವಾಂತರ
ಅದು ನೀಡುವ ತೊಂದರೆಗಳು ಮಾತ್ರ ನಿರಂತರ.
ಈ ಬಾರಿ ಅದು ತಂದಿಟ್ಟ ತೊಂದರೆಯೇ ಪ್ರೀತಿ
ಇದೊಂಥರ ಕುಡಿಯಲೇಬೇಕೆನಿಸುವ ವಿಷದ ರೀತಿ
ಅತ್ತ ಮೈಯೆಲ್ಲ ನಂಜೇರಿಸಿ ಕೊಲ್ಲುವುದೂ ಇಲ್ಲ
ಇತ್ತ ಹೃದಯ ಬಡಿತ ಹೆಚ್ಚಿಸಿ ಬದುಕಿಸುವುದೂ ಇಲ್ಲ.
ಇನ್ಮುಂದೆ ನನ್ನ ಬದುಕಾಗಲಿದೆ ಗೊಂದಲಮಯ
ನನ್ನೀ ಪರಿಸ್ಥಿತಿ ಕಂಡು ನಗುತ್ತಿದೆ ಹಾಳು ಹರೆಯ.
- ಅಕವಿ
06 Mar 2017, 05:13 pm
Download App from Playstore: