ವಾಸ್ತವಿಕತೆ
ಕಣ್ತುಂಬ ನಿದ್ದೆ
ಕಣ್ಣಿನ ರೆಪ್ಪೆಯಡಿ ಕನಸಿನ ಕನವರಿಕೆಗಳು
ನಾ ಮುಂದು ನೀ ಮುಂದು
ಮನದ ಬಾಗಿಲು ತಟ್ಟುವ
ಕನಸಿನ ಕಳ್ಳ ಕ್ಷಣಗಳು
ಕಣ್ತೆರೆದು ನೋಡಿದರೆ
ಅಧ್ಬುತ ಜಗತ್ತು
ಒಮ್ಮೆಲೆ ಮುತ್ತಿಗೆ ಹಾಕುವ
ಜವಾಬ್ದಾರಿಯ ಕಸರತ್ತು
ಸಂಬಂಧಗಳ ಜಂಜಾಟ
ಭಾವನೆಗಳ ಪರದಾಟ
ಸ್ವಾರ್ಥಿಗಳ ದೊಡ್ಡಾಟ
ಅಹಂಕಾರಿಗಳ ಬಯಲಾಟ ನೋಡುವಂತದ್ದು
ಕಲ್ಪನೆಯ ಕನಸಿನಲ್ಲೂ
ವಾಸ್ತವಿಕತೆಯ ಬದುಕಿನಲ್ಲೂ
ಒಂದೇ ಬಿರುಗಾಳಿ ಬೀಸಿದೆ
ಅದು ಆಸೆಯ ಬಿರುಗಾಳಿ
ಬಿರುಗಾಳಿಯಲಿ ಸಿಲುಕಿದ
ಮನುಜರು ನಾವು
ಅಜ್ಞಾನದಿಂದ ಬಳಲುತಿರುವ
ರೋಗಿಗಳು ನಾವು
ಸ್ವಾರ್ಥಕ್ಕಾಗಿ ಬದುಕ್ಕುತ್ತಿರುವ
ಜೀವಿಗಳು ನಾವು
Siddhkirti
- kirti
07 Mar 2017, 11:46 am
Download App from Playstore: