ಬೇಡ ನಿನಗೆ ಬೇಸರ
ಬೇಸರವಾಗದಿರು ಮನವೇ
ಬೇರೆಯವರ ಬಯಕೆಗಾಗಿ
ಅವರಾಡುವ ಮಾತಿಗಾಗಿ
ಸಂಬಂಧಗಳ ಕಹಿತನಕ್ಕಾಗಿ
ಬೇಸರವಾಗದಿರು ಮನವೇ
ಬಯಸದೆ ಬಂದಿರುವ ದು:ಖಕ್ಕಾಗಿ
ಸ್ನೇಹದಲಿ ಹುಳಿಹಿಂಡುವ ಜೀವಕ್ಕಾಗಿ
ನಂಬಿಕೆದ್ರೋಹ ಮಾಡುವ ಪ್ರೀತಿಗಾಗಿ
ಬೇಸರವಾಗದಿರು ಮನವೇ
ಕಾರಣ ತಿಳಿಯದೆ ಬರುವ ಕಣ್ಣೀರಿಗಾಗಿ
ಬವನೆಯ ಅರಿಯದ ಮನಗಳಿಗಾಗಿ
ನೀನೆ ಅವರ ಬೇಸರಕ್ಕೆ ಕಾರಣವಾಗಿ
ಬೇಸರವಾಗದಿರು ಮನವೇ
✍
- kirti
07 Mar 2017, 12:12 pm
Download App from Playstore: