ಪುಟಾಣಿ ಮಕ್ಕಳು
ಬಾ ಬಾ ಚಿಟ್ಟೆ
ಬಣ್ಣದ ಚಿಟ್ಟೆ
ಹೂವಿನ ರಸವನು
ನೀ ಹೀರಲು ಬಾ||೧||
ಬಾ ಬಾ ನವಿಲೇ
ಚಿನ್ನದ ನವಿಲೇ
ಗೆರೆಯನು ಬಿಚ್ಚುತ್ತಾ ಹಾಡುತಾ
ನಮ್ಮೊಡನೆ ನಲಿಯಲು ಬಾ||೨||
ಬಾ ಬಾ ಕೋಗಿಲೆ
ಸುಂದರ ಕೋಗಿಲೆ
ಕುಹೂ-ಕುಹೂ ಹಾಡನ್ನು
ಹಾಡಲು ಬಾ||೩||
ಬಾ ಬಾ ಗಿಳಿಯೇ
ಪಂಜರ ಗಿಳಿಯೇ
ಸುಂದರ ಭವಿಷ್ಯವು
ಹೇಳಲು ನೀ ಬಾ ಬಾ||೪||
ಬನ್ನಿ ಬನ್ನಿ ಮಕ್ಕಳೇ
ಪುಟಾಣಿ ಮಕ್ಕಳೇ
ಆಟವ ಆಡಲು ನೀವು ಬನ್ನಿ
ಆಡುತ್ತಾ ನಲಿಯೋಣ ಎಂದೆಂದೂ||೫||
- ಕೆ.ಕೆ.ನಂದಾದೀಪ್(ಕೋಲಾರದ ಕಂದ)
07 Mar 2017, 05:36 pm
Download App from Playstore: