ಯಾರು ನೀ.....?
ನೀ ಯಾರೆಂದು ಅರಿಯೆನು ನಾ
ಮನ್ನಿಸು ಗೆಳತಿ .....ಹೃದಯಹೀನ ನಾ
ನೆನಪುಗಳ ತಿರುವಿಹಾಕಲಾರೆ
ತಾಳೆನು ಭಾರವ.....ಶಕ್ತಿ ಹೀನ ನಾ
ಸಹಜ ಮಾನವ ಭಾವನೆಗಳು
ಪ್ರೀತಿ ಪ್ರೇಮಗಳಿವು....
ಹುಳಿ ಖಾರ ಉಪ್ಪು ತಿಂದ ದೇಹವಿದು
ಅದರ ಗಾಳಕೆ ಸಿಕ್ಕಿರುವುದು.....
ನನ್ನ ಹೃದಯವಿಗ ನನ್ನ ಕೈಯಲ್ಲಿಲಾ
ಹುಚ್ಚು ಸ್ನೇಹಿತರು ನನ್ನವರು
ಕಸಿದುಕೊಂಡಿರುವರು ಜೋಪಾನ ಮಾಡಲು...
ನೀ ಯಾರೆಂದು ಅರಿಯೆನು ನಾ
ಮನ್ನಿಸು ಗೆಳತಿ .....ಹೃದಯಹೀನ ನಾ
- MK Reddy
07 Mar 2017, 07:08 pm
Download App from Playstore: