ಕನ್ನಡಿಗನ ಮನಸು

ನಾನು ಸಾಯುವ ಕ್ಷ ಣದಲ್ಲಿ
ಎಡಗೈ ನನ್ನ ಮೀಸೆಯ ಮೇಲಿರಲಿ,
ಬಲಗೈಯಲ್ಲಿ ತ್ರಿವರ್ಣ ಧಜವಿರಲಿ,
ನನ್ನ ಸುತ್ತ ಮುತ್ತಲು ಕನ್ನಡಿಗರ
ಸಾಲು ಇರಲಿ,
ನನ್ನ ನಾಲಿಗೆಯು ಕನ್ನಡವನ್ನೆ ನುಡಿಯುತ್ತಿರಲಿ,
ನನ್ನ ಎರಡು ಕಣ್ಣುಗಳಲ್ಲಿ
ಕರ್ನಾಟಕವೇ ಕಾಣುತಿರಲಿ,
ಹೀಗೆ ನನ್ನ ಮರಣವಾಗಲಿ.

- ಮೈನುಸಾಬ

07 Mar 2017, 07:33 pm
Download App from Playstore: