-:ಮನವು ಮಾತಾಡುವ ಮುನ್ನ:-
ಮನವು ಮಾತಾಡುವ ಮುನ್ನ,
ಕಣ್ಣಲಿ ಕನಸಿತ್ತು, ಮನಸಲಿ ಛಲವಿತ್ತು,
ಮಾತಲಿ ಧ್ರುಡತೆ ಇತ್ತು, ನಿರ್ದಾರದಲಿ ಅಛಲತೆ ಇತ್ತು.
ಮನವು ಮಾತಾಡುವ ಮುನ್ನ,
ನಾನು ನಾನಾಗಿದ್ದೆ, ಬಾನು ಮನದುಂಬಿ ನೋಡುತ್ತಿದ್ದೆ,
ತನುವನು ಸೋನೆಮಳೆಗೆ ಚಾಚುತ್ತಿದ್ದೆ,
ಬಾಳನು ಸಂಭ್ರಮಿಸುತ್ತಿದ್ದೆ.
ಮನವು ಮಾತಾಡಿದಾಗ,
ಬಾವದ ಅಲೆಯಲ್ಲಿ ಒಲವು ಮೂಡಿದಾಗ,
ಕಳೆದು ಹೋದೆ, ಕರಗಿ ಹೋದೆ,
ಗುಲಾಮನಾಗಿ ಹೋದೆ.
ನನ್ತನ ನನ್ನಲಿ ಅಳಿಸಿ ಹೋಯಿತು.
ಮನವು ಮಾತಾಡಿದಾಗ,
ಮನವು ಮನದೊಡಗೂಡಿ,
ಮೂಕ ಭಾವಗಳಿಗೆ ಅರ್ಥ ಹುಡುಕುತ್ತಿತ್ತು,
ವ್ಯರ್ಥ ಆಶೆಗಳಿಗೆ ಜೀವ ತುಂಬುತ್ತಿತ್ತು,
ಕನಸು-ನನಸುಗಳ ಅಂತರವನ್ನು ಅಳಿಸಿ ಹಾಕಿತ್ತು.
ಮನವು ಮಾತಾಡಿದಾಗ,
ಮೂರ್ಖ ಮನಕೆ ತನ್ನ ಅಸ್ತಿತ್ವದ ಚಿಂತೆ,
ವಾಸ್ತವದ ಕ್ರೂರತೆಯ ಪರಿ ಮನದ ಭಾವವ ಕದಡಿತ್ತು.
ಎದ್ದು ನೋಡಿದಾಗ ಎಲ್ಲವೂ ಅಯೋಮಯ,
ಭಾವಶೂನ್ಯತೆ ಸಂಧಿಗ್ಧತೆ.
ಎದ್ದೆ, ಹೊರನಡೆದೆ,
ಒಲುಮೆ-ಕಂಗಳ ಚಲುವೆಯೊಡಗೂಡಿ,
ಚಹ ಕುಡಿದು "ಉಫ" ಎಂದೆ.
ಮತ್ತದೇ ಕಣ್ಸಮರ,
ಮತ್ತೆ ಮಾತಾಡಿತು ಮನ,
ಅದು ಯಾವತ್ತು ಹೊತ್ತೊಯ್ಯುವುದೋ ನನ್ನ ಹೆಣ.
ಬಾ.ಸಂ.ಪಾ
- ಅಭಿರಾಮ್
08 Mar 2017, 11:13 am
Download App from Playstore: