ನಿನ್ನ ಮರೆತರೆ ತಾಯಿ
ನಿನ್ನ ಮರೆತರೆ ತಾಯಿ
ಮರು ಜನ್ಮವಿಲ್ಲ ನನಗೆ|
ಜನ್ಮ-ಜನ್ಮ ನಿನಗಾಗಿ
ಜನಿಸುವೆನು ನಿನ ಸೇವೆಗೆ||ಪಲ್ಲವಿ||
ಕರುಳ ಬಳ್ಳಿಯ ಕಿತ್ತು
ನನಗೆ ಜನುಮವೆತ್ತು|
ಪ್ರೇಮದಿ ಹಾಲನುಣಿಸಿ
ನೀ ಹೃದಯದಿ ನನ್ನಿರಿಸಿ||೧||
ಮೊದಲು ಗುರುವು ಆಗಿ
ಅಕ್ಷರ ಕಲಿಸಿ ನನಗೆ|
ಪ್ರೀತಿಯ ಅರಿವು ಮೂಡಿಸಿ
ಬದುಕಲು ದಾರಿ ತೋರಿಸಿ||೨||
ತಂದೆಯು ನೀನಾದೆ ನನ ಬಾಳಿಗೆ
ನೀ ಕಷ್ಟಗಳ ಬೆನ್ನಟ್ಟಿ ಹೋರಾಡಿದೆ|
ನೀ ಧೈರ್ಯದಿ ಮುಂದೆ ಸಾಗುತಾ
ಸಂಸಾರ ಸಾಗರವ ಈಜುತಾ||೩||
ನೆತ್ತಿಯ ಮೇಲೆ ಉರಿಬಿಸಿಲು
ಗಾಳಿ,ಮಳೆಯನು ಲೆಕ್ಕಿಸದೆ|
ನೀ ದುಡಿಯುತಲಿದ್ದೆ
ಏನು ಪ್ರತಿಫಲವ ಯಾಚಿಸದೆ||೪||
ಎತ್ತು ಹೊತ್ತವರ ಸುಖವಿಲ್ಲ
ಗಂಡನ ಆಸರೆಯಿಲ್ಲ|
ಮಕ್ಕಳ ಬದುಕಿಗಾಗಿಯೇ
ನಿನ್ನ ಬಾಳು ಮುಡುಪಾಗಿಟ್ಟೆ||೫||
ನೀ ಮುಳುಗಿದೆ ದುಃಖ ಸಾಗರದಿ
ಎಂದು ತೇಲುವೆ ಸಂತೋಷದ ಆಗಸದಿ|
ಬಾಳಲ್ಲಿ ಬೆಳಕು ಮೂಡಿಸುತಾ
ಎಂದು ನಡಿವೆ ನೀ ಸುಖಜೀವನ ಪಥದಲ್ಲಿ||೬||
ಏನೇ ಆದರೂನುವೆ
ನಾ ಎಂದಿಗೂ ತಾಯಿಯ ಮರೆಯಲ್ಲ|
ಒಮ್ಮೆ ಮರೆತರೆ ನಾನೆಂದು ಉಳಿಯಲ್ಲ
ಉಳಿದರೂನು ಬದುಕಿಲ್ಲ||೭||
- ಕೆ.ಕೆ.ನಂದಾದೀಪ್(ಕೋಲಾರದ ಕಂದ)
08 Mar 2017, 07:59 pm
Download App from Playstore: