ಸುಮಧುರತೆ
ಗುಣದಲಿ ಸಿಹಿತನ
ಹೃದಯದಿ ಸಿರಿತನ
ಮಾತಿನಲಿ ಮಾಧುರ್ಯ
ನೀ ಬೆಳೆಸಿಕೊ
ದಯೆಯನು ತೋರು ಬಾ
ಕ್ಷಮೆಯ ಕೇಳು ಬಾ
ಬದುಕಲಿ ಬಾಂಧವ್ಯ ನೀ ಬೆಳೆಸಿಕೊ
ಮನದಲಿ ಭಾವವು
ಬದುಕಲು ಪ್ರೀತಿಯು
ಸಂಬಂಧ ಉಳಿಯಲು ಸಹನೆ ಬೆಳೆಸಿಕೊ
ನಿನ್ನವರು ಯಾರಿಲ್ಲ
ನಿನಗೆ ನೀನೆ ಎಲ್ಲ
ಬದುಕಲು ಒಳ್ಳೆತನ ನೀ ಬೆಳೆಸಿಕೊ
ಬದುಕಿನ ಬಣ್ಣವು
ಹಲವು ವಿಧ ವಿಧ
ನಿನ್ನಾಸೆ ಬಣ್ಣವ ನೀ ಹುಡುಕಿಕೋ
ನೊಂದದೆ ಮುನ್ನಡಿ
ನಲಿಯುತ ಜೊತೆಗೂಡಿ
ಮಣ್ಣಾಗೋ ಮುನ್ನವೆ ಕೀರ್ತಿ ಗಳಿಸಿಕೊ...
✍
- kirti
10 Mar 2017, 06:49 am
Download App from Playstore: