ಕಾಲದ ಒಲವು
ಬಳ್ಳಿ ಮರಕ್ಕೆ ಹಬ್ಬಿ
ಮರವು ಒಲವಿಂದ ಅಪ್ಪಿ
ಎರಡೂ ಪ್ರೀತಿಲಿ ಹಿಗ್ಗಿ
ಬೆರೆತ ಕಾಲವೇ ಸುಗ್ಗಿ!!
ಬೆವರ ಹನಿಗಳ ಅಳಿಸಿ
ಬಿಸಿಲ ಬೇಗೆಯ ಮರೆಸಿ
ಬೆಚ್ಚಗಿನ ಸುಖಕಾಗಿ ತನು
ಬಯಸೋ ಕಾಲವೇ ಮಾಗಿ!!
ಸುಗ್ಗಿ ಮಾಗಿಯ ನಡುವೆ
ಹಿಗ್ಗಿ ತೇಲುತ ತನುವು
ಬಯಸಿ ಬಂದಿದೆ ನಿನ್ನ
ಒಲವ ಬಯಕೆಯ ಹೊತ್ತು!!
ನೆತ್ತಿ ಸುಡುತಿಹ ಬಿಸಿಲ
ಬೇಗೆ ತಡೆಯಲು ಇರುಳ
ಇರುಳ ತಿರುವಲೂ ನೆರಳ
ಅರಸಿ ಬಂದಿದೆ ಮನವು!!
ತನುವ ಕಂಪನಗೊಳಿಸ
ಮಳೆಯ ಸಿಂಚನವಿರಿಸಿ
ಬಾ ಬಂದು ಸೇರಿಕೋ ನೀ
ಎಂದೆನ್ನ ಒಲವು ಕರೆದಿದೆ ನಿನ್ನ!!
- ಪಿ.ಜಿ.ಜ್ಯೋತಿ
10 Mar 2017, 05:58 pm
Download App from Playstore: