ಮುತ್ತುಗಳನ್ನು ಆಯ್ದುಕೊಡಲೆ

ಮೋಹಿಸಿದಳಾ ಭಾನುಮತಿ ಕರ್ಣನನ್ನು .
ಪತಿಯ ಕೇಳಿದಳು ಕರ್ಣನ ಜೊತೆ
ಪಗಡೆಯಾಡಲು ಇಛ್ಛೆಯಾಗಿದೆ ಎಂದು .

ಸತಿಯು ಕೇಳಿದ ಕೂಡಲೆ ಆ ಕೌರವೇಂದ್ರನು
ಸಿದ್ದ ಮಾಡಿದನು ಪಗಡೆಯಾಟವ
ಪ್ರಾಣಸತಿ ,ಪ್ರಾಣ ಸ್ನೆಹಿತನ ನಡೆವೆ .

ಕೇಳಿದನಾ ಕರ್ಣ ನಾನು ಗೆದ್ದರೆ
ಬಹುಮಾನ ಏನು ಕೊಡುವೆ ಎಂದು .
ಭಾನುಮತಿ ನಸು ನಕ್ಕಿ ನನ್ನ ಕತ್ತಲ್ಲಿನ
ಮುತ್ತಿನ ಹಾರವೇ ನಿನ್ನದಾಗುತ್ತದೆOದು.

ಪಗಡೆಯಾಟ ಮನರಂಜಕವಾಗಿ ನಡೆಯಿತು
ಕೊನೆಗೂ ಸೋತಳಾ ಭಾನುಮತಿಯೂ
ಕರ್ಣ ಕೇಳಿದನು ತನ್ನ ಬಹುಮತಿಯ
ಅವಳು ಕೊಡಲು ಓಪ್ಪಲಿಲ್ಲ .

ಆದರೂ ಕರ್ಣ ಬಿಡದೆ ಅವಳ ಕೊರಳಿಗೆ
ಕೈ ಹಾಕಿ ಮುತ್ತಿನ ಹಾರವನ್ನು ಕಿತ್ತುಕೊOಡನು.
ಇದರಿಂದ ಮುತ್ತುಗಳೆಲ್ಲಾ ನೆಲದಲ್ಲಿ ನಗುತ್ತಾ ಜಾರಿಬಿದ್ದವು .

ಇದನ್ನು ಕಂಡ ದುರ್ಯೋಧನ ಕೇಳಿದನು
ಸ್ನೆಹಿತನನ್ನು ಮುತ್ತುಗಳನ್ನು ಆಯ್ದು ಕೂಡಲೇ
.........................? ಎಂದು .
ಎಂತಹ ಸ್ನೇಹವಿದು ಕೇಳಿದ ಕ್ಷಣವೇ
ಅಚ್ಚರಿಯಾಯಿತು.

- ಚುಕ್ಕಿ

10 Mar 2017, 08:04 pm
Download App from Playstore: