ಕೆಸರ ಕಮಲ
ಕೆಸರಿನಲ್ಲಿ ಕಮಲದಂತೆ
ಅರಳಿ ಬಂದೆ ಬದುಕಲಿ!!
ವೇಶ್ಯೆ ನಾನು ಆದರೇನು
ನೀನು ಬೆಳಗೋ ಹಣತೆಯು!!
ನನ್ನ ಕನಸು ಕರಗಿದಂತೆ
ನಸುಕಿನಲ್ಲಿ ಚದುರಿ ಹೋಯ್ತು!!
ಅಳುತ ಕುಳಿತೆ ಒಂಟಿಯಾಗಿ
ಆಸರೆಯಾಗೋ ಬಂಧುಗಾಗಿ!!
ಬೆರಳ ತೋರೋ ಕಡೆಗೆ ಚಲಿಸಿ
ಕಳೆದುಕೊಂಡೆ ಬದುಕನು!!
ಇರುಳ ಕಳೆವ ಬೆಳಕಿನಂತೆ
ನೀನು ಬಂದೆ ಮಡಿಲಲಿ!!
ನಿನ್ನ ನಗುವ ಮೊಗವ ಕಂಡು
ಮರೆತೆ ನನ್ನ ನೋವನು!!
ನಾನು ಸೊರಗಿ ಹೋದರೂನು
ನೀನು ಎಂದೂ ನಗುತಿರು!!
ಕಣ್ಣ ತುಂಬ ನಿನ್ನ ಬಿಂಬ
ಸಾವಿರಾರು ಬಯಕೆಯು!!
ನನ್ನ ನೆರಳೂ ಸೋಕದಂತೆ
ಬಾಳ ಹೋಗೂ ದೂರಕೆ!!
ಬಣ್ಣ ಬಣ್ಣ ಬದುಕಿನಲ್ಲಿ
ನಿನ್ನ ಪಯಣ ಸಾಗಲಿ!!
ಮರಳಿ ಕೆಸರ ಸೇರದಂತೆ
ದೇವರ ಮುಡಿಯ ಸೇರಿಕೊ!!
- ಪಿ.ಜಿ.ಜ್ಯೋತಿ
11 Mar 2017, 10:48 am
Download App from Playstore: