ಮರೆಯಲಿ ಹೇಗೆ
ಮರೆತೆನೆಂದರೂ ನಿನ್ನ
ಮರೆಯಲಾರೆನು ಚಿನ್ನ!!
ಮನಸಿನಲ್ಲಿಯೇ ಉಳಿವೆ
ಮರೆತು ಹೋಗುವ ಮುನ್ನ!!
ಮರೆತು ಹೋದರೆ ನಿನ್ನ
ಬದುಕಲಿ ಯಾವುದು ಚೆನ್ನ!!
ನೆನೆಯಲಿ ಹೇಗೆ ನಿನ್ನ
ಮರೆತು ಹೋಗದೇ ಚಿನ್ನ!!
ಚಿತ್ತದಿ ಉಳಿಯುವ ನಿನ್ನ
ಮರೆಯಲಿ ಹೇಗೆ ಚಿನ್ನ!!
ಬದುಕ ಹಣತೆಯೇ ನಿನ್ನ
ಬೆಳಕ ಜೀವನ ಚೆನ್ನ!!
ಮರೆತು ಹೋಗುವ ಮುನ್ನ
ಮತ್ತೆ ಮರಳುವೆ ಚಿನ್ನ!!
ಮರಣದಲ್ಲಿಯೂ ನಿನ್ನ
ನೆರಳಿನಂತೆಯೇ ಚಿನ್ನ!!
- ಪಿ.ಜಿ.ಜ್ಯೋತಿ
11 Mar 2017, 11:08 am
Download App from Playstore: