ನಿನ್ನ ಪ್ರೀತಿಯ ನಲ್ಲೆ
ನಿನ್ನ ಎದೆಯ ಬಾಗಿಲಿಗೆ
ನಾ ಬಂದು ನಿಂತಿರುವೆ.
ಕದ ಬಡಿಯುವ ಆಸೆಯು ನನಗೆ
ಆದರೂ ಏನೋ ತಿಳಿಯದ
ಅಂಜಿಕೆ ಎದೆಯೊಳಗೆ.
ನಿನ್ನ ಮೊದಲ ನೋಟಕೇ
ಮರುಳಾಯ್ತು ನನ್ನ ಮನ.
ತುಡಿತ ತುಂಬಿದ ಮನದ
ಮಿಡಿತ ಮುನಿಯುವ ಮುನ್ನ
ಕದವ ತೆರೆದು ಬಾಚಿ ತಬ್ಬಿಕೋ ಎನ್ನ.
ನಿನ್ನೆದೆಯ ಕದವನು ತಟ್ಟಿ
ಸದ್ದು ಮಾಡುವ ದೈರ್ಯ ಎನಗಿಲ್ಲ.
ನೀನಾಗೆ ಮನಸು ಮಾಡಿ
ಸ್ವಾಭಿಮಾನದ ಚಿಲಕವ ಬದಿಗೆ ಸರಿಸಿ
ನನ್ನನು ನಿನ್ನೊಳು ಬರಮಾಡಿಕೋ.
-- ನಿನ್ನ ನೆರಳು ಮೂಡಿದ
ದಾರಿಯನೇ ಹಿಂಬಾಲಿಸುತ.
ನಿನ್ನ ಮೌನಯಾನದ ಪ್ರತೀ ಹೆಜ್ಜೆಯ ಸದ್ದು
ನಾನಾಗಬೇಕೆಂದು ಹಂಬಲಿಸುತ.
ನಿನ್ನ ಹೃದಯರಾಗದ ನಲುಮೆಗಾನವನೇ
ಅನುಕ್ಷಣವೂ ಆಲಾಪಿಸುತ.
ನಿನ್ನೆದೆಯ ಬಾಗಿಲಲೇ ಕಾದು ಕಳಿತಿರುವ
ನಿನ್ನ ಪ್ರೀತಿಯ ನಲ್ಲೆ.
-ಮಾಧುರಿ
- ಮಾಧುರಿ
11 Mar 2017, 03:55 pm
Download App from Playstore: