ಮೂರು ದಿನದ ಆಟದಲ್ಲಿ

೧)ಜನನ
೨)ಸಾಧನೆ
೩)ಮರಣ

೧) ಜನನ:

‌* ತರಲಿಲ್ಲವೇನು ನಾನು ನನ್ನ ಸ್ವಂತದೆಂಬುವುದನ್ನು
‌* ಕಣ್ತೆರೆದು ನೋಡಿದೆ ನನ್ನ ತಾಯಿಯ ಮುಖವನ್ನು
‌ * ಆರಂಭವಾಯಿತು ಅಂಬೆಗಾಲಿನ ದಿನಗಳಂದು
‌ * ಮುನ್ನುಡಿ ಬರೆಯಿತು ತಾಯಿಯ ಮೊದಲ ಪಾಠವು "ಅಮ್ಮ" ಎಂಬ ಸ್ವರ್ಣದ ಅಕ್ಷರದಿ
‌ * ತುಂಟತನದಿ ಸಾಗಿತು ಅಮ್ಮನ ಜೊತೆಯಾಟವು
‌ * ಸಾಗಿತು ಬಾಲ್ಯದಿಂದ ಯವ್ವನದೆಡೆಗೆ ನನ್ನ ಅಂಬೆಗಾಲಿನ ಓಟವು

೨) ಸಾಧನೆ:

‌ * ಮುಗಿಯಿತು ಬಾಲ್ಯದ ದಿನಗಳಂದು ಶುರುವಾಯಿತು ಜಟಿಲ ಜೀವನದ ಹೆಜ್ಜೆಗಳು
‌ * ಪಡೆದೆ ನಾನು ಸ್ನೇಹ ಪ್ರೀತಿಯನ್ನು ಸಾಗಿತು ಸಾಧನೆಯ ಪಯಣವು
‌ * ಏರಿಳಿತಗಳು ಬಂದವು ಸಾಧನೆಯ ಕಡಲಲ್ಲಿ
‌ * ಅಳುಕಿತು ಮನವು ಗುರಿ ಮುಟ್ಟುವೆನಾ? ಎಂಬ ಆತಂಕದ ಆಳದಲ್ಲಿ
‌ * ಮುನ್ನುಗ್ಗಿದೆ ನಾ ಅಲೆಗಳೆತ್ತರವ ಮೆಟ್ಟಿ ನಿಂತು
‌ * ಜೊತೆಗೂಡಿ ಬಂದಿರಲಿಲ್ಲ ಕೈ ತುತ್ತು ತಿಂದೆನಲ್ಲ. ನನ್ನ ಗೆಳೆತನವೆಂಬ ದೇಗುಲದಲ್ಲಿ
‌ * ಭಯವೆಂಬ ಮಾಯಾ ನಗರಿಯಲ್ಲಿ ಒಂಟಿ ಇರಲು ಬಯಸಲಿಲ್ಲ
‌ * ಸ್ವಾಭಿಮಾನದ ಬಟ್ಟೆ ತೊಟ್ಟು, ಸಾಧನೆಯ ಶಿಖರದತ್ತ ಧೈರ್ಯವೆಂಬ ಆಯುಧ ಹಿಡಿದು ಸಾಧಿಸಲು ಅಣಿಯಾದೆನಂದು
‌ * ಸಾಗುತಲಿದೆ ಸಾಧನೆಯ ಪಯಣವು ಇಂದಿಗೂ

೩) ಮರಣ:

‌ * ಸಂಸಾರದ ಸಂಕಟಗಳು, ಜೀವನದ ಜಿಗುಪ್ಸೆಗಳನ್ನು ದಾಟಿ ನಡೆದೆನು ಏಕಾಂಗಿಯಾಗಿ ಇರುಳಿನ ಮನೆಗೆ
‌ * ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಬಂದು ಹೋಗುವ ನಡುವೆ ಕಂಡೆನು ಅನಂತ ದೀವಿಗೆಯ ಬೆಳಕನ್ನು
‌* ನಾನು ನನ್ನದು ಎಲ್ಲವನ್ನೂ ಮೀರಿ ಜಯಿಸಿದೆ ನನ್ನವರನ್ನು
‌* ಜೀವನವು ಸಾಕಾರವಾಯಿತು ಸ್ನೇಹ ಜೀವಿ ನಾನಾಗಿ
‌ * ಎಲ್ಲರೊಳಗೊಂದಾಗಿ ಎಲ್ಲರಿಗೂ ಬೇಕಾಗಿ ಎಲ್ಲವರಿಯುವ ಲೋಕಕ್ಕೆ ನಡೆದೆನು ನಾನಿಂದು.....

- Irayya Mathad

12 Mar 2017, 04:43 pm
Download App from Playstore: