ಬದುಕು ಬಣ್ಣದೋಕುಳಿ

ಬರದ ಬಾಗಿಲುಕೋಟೆಯಲ್ಲಿ
ಭಾರಿಸು ಮನದ ಬಯಕೆಯ
ಹಲಿಗೆ
ಭರತ್ ಭೂಮಿಯಲ್ಲಿ ಹಲಿಗೆ ಮೇಳದ ನಾದದಿ ಪ್ರಶಸ್ತಿ ಗಳಿಸಿದ
ಹಿರಿಮೆ
ಬರದ ನಡುವೆ ಬಯಸಿ ಬಾರಿಸಿದೆ
ನಮ್ಮೂರಿನ ಹಲಿಗೆ

ಬದುಕು ಬಣ್ಣದೋಕುಳಿ
ಜೀವನಾ ರಂಗಿನೊಕುಳಿ

ಬಣ್ಣದ ಉತ್ಸವದೊಳು
ಕನ್ನಡ ನಾಡಿಗೆ ನಾವೇ ಮೆಲ್ಲೆಂಬ ಹಿರಿಮೆ
ಜಂಬದಿಂದೇಳುವೆ ರಂಗಿನಾಟಕೆ ಬಾಗಿಲುಕೋಟೆ ಭಾರತಕ್ಕೆ ಮೇಲುಕೋಟೆ


ಬದುಕು ಬಣ್ಣದೋಕುಳಿ
ಜೀವನಾ ರಂಗಿನೊಕುಳಿ

ಬಯಲು ಭವನದಲ್ಲಿ
ಚದುರಿಸು ರಂಗು ದಂಗು
ನಮ್ಮೂರ ಬಣ್ಣ ಬರಿ ರಂಗಲ್ಲಾ
ಸಂಬಂದಗಳ ಬೆಸೆಯುವ ಒಂದೊಳ್ಳೆ ಹಬ್ಬ


ಬದುಕು ಬಣ್ಣದೋಕುಳಿ
ಜೀವನಾ ರಂಗಿನೊಕುಳಿ

- ಪ್ರದೀಪ.ಮ.ಪಾಡಮುಖೆ

12 Mar 2017, 09:13 pm
Download App from Playstore: