ಪ್ರೀತಿಯ ರಂಗು
ಏಳು ರಂಗಂತೆ ನಿನ್ನ ಪ್ರೀತಿಯ ರಂಗು
ಬಾನ ಏರೋದು ಮನದ ಆಸೆಯ ಕಂಡು!!
ಕಂಡ ಕನಸೆಲ್ಲ ಗರಿಗೆದರಿ ಕುಣಿದಾಡಿದೆ
ನನ್ನ ತನುವೀಗ ರೆಕ್ಕೆ ಬಿಚ್ಚಿ ಹಾರಾಡಿದೆ!!
ನೀನು ಸನಿಹಕ್ಕೆ ಬಂದಾಗ ನಾ ಬೆವರಿದೆ
ಈ ಒಲವಲ್ಲಿ ಬಿಸಿ ಉಸಿರು ಬೆರೆತಂತಿದೆ!!
ನಿನ್ನ ಪ್ರೀತಿಯ ಹೊಂಗಿರಣಕ್ಕೆ ನಾ ಸೋತರೆ
ನನ್ನ ಒಲವಿಂದ ಹೂ ಮಳೆ ತಾ ಸುರಿವುದು!!
ದಿನ ಇರುಳಲ್ಲಿ ಕನಸಾಗಿ ನೀ ಬಂದರೆ
ಹಗಲೆಲ್ಲ ಭ್ರಮೆಯಂತೆ ನನ್ನ ಕಾಡುವೆ!!
ನನ್ನ ಏಕಾಂತಕೆ ತಂದೆ ನೀ ಕಾಂತಿಯ
ಸುರಿಸಿ ನನ್ನೊಳಗೆ ಹೊಸ ರಂಗಿನ ಪ್ರೀತಿಯ!!
- ಪಿ.ಜಿ.ಜ್ಯೋತಿ
14 Mar 2017, 08:42 am
Download App from Playstore: