ಸಾಂಗತ್ಯ ಮೂಡಿ
ತನುವು ಹರಿದು ನಿನ್ನೆಡೆ,
ಮನವು ಎಲ್ಲೆ ಮೀರಿ ಕಾಡಿದೆ,
ಕದಡಿ ಕಾಮನೆಯ ಜೇನನು,
ತುಮುಲ ಹೆಚ್ಚಿಸಿ ಅನುವು ನೀನು..
ಅರಳಿ ಕುಸುಮ ಬಾಲೆ,
ಮುಡಿದು ಜಾಜಿ ಮಲ್ಲೆ,
ಮರುಳು ಮಾಡಿ ಮರದ ಮನವ,
ತೋಳ ತಾಗಿ ತೂಗಿ ತನುವ..
ತಾಳದಿರು ಕೊಂಚ,
ಅವಸರದಿ ಅಪಹರಿಸಿ,
ಆಕಾಂಷೆಗಳ ಗಮಕ ಹಾಡಿ,
ಲಯವು ತಪ್ಪದೆ ಸಾಂಗತ್ಯ ಮೂಡಿ..
-ಕನ್ನಡದ ಭಕ್ತ
- ಕನ್ನಡದ ಭಕ್ತ
14 Mar 2017, 12:39 pm
Download App from Playstore: