ಹಲ್ಕಾ ಕವನ
#ಹಲ್ಕಾ_ಕವನ
ಶಾಂತ ಕಡಲೊಳಗೆ ಅವಳೊದೊಂದು
ವಿನಾಃ ಕಾರಣ ಯುದ್ಧ ಜರಗುತ್ತದೆ
ತೊಟ್ಟಿಲ್ಲಲ್ಲಿದ್ದ ಸೌಮ್ಯತೆಯೊಂದು
ಬೆಚ್ಚಿ ಬೀಳುತ್ತದೆ...!!
☆
ಕಪ್ಪು ಹುಡುಗನ ಸಿಗರೇಟು
ಮುತ್ತಿಟ್ಟ ಮಸಿತುಟಿಯೆಂದರೆ
ಅವಳಿಗೆ ಅದೇನೋ ಮೋಹ
ಕಚ್ಚಿ ಹೋಗುತ್ತಾಳೆ ಅದು ಕೂಡ
ಅರಿವೇ ಆಗದೇ..
☆
ನಿಮಿಷಗಳ ತರುವಾಯ
ಎಚ್ಚೆತ್ತರೆ ಅದೇ ಗುಳಿಕೆನ್ನೆಯ
ಸುಗಂಧ ಕಿಟಕಿ ಸಂಧಿನೊಳಗೆ
ಪಸರಿಸುತ್ತದೆ
ಮುಂದಿನ ನಿದ್ದೆಗೆಲ್ಲಾ ಭಗ್ನಪ್ರಾಪ್ತಿ.!
☆
ಸಂವೇಗಗಳ ಲೆಕ್ಕ ಹಾಕುವ
ಅವಳೊಳಗಿನ ಬಡಿತಗಳು
ಚೂರು ತಪ್ಪದೇ ಕಾಡಲು
ಶುರುವಿಡುತ್ತದೆ
ನಿಮಗೇನು ಗೊತ್ತು!?ಕಾಡಿದರೆ
ಮಾತ್ರ ಕೂಡುವ ಫಲ ದೊರೆಯುವುದು.!!
☆
#ಅವಿಜ್ಞಾನಿ
- ಅವಿಜ್ಞಾನಿ
14 Mar 2017, 01:06 pm
Download App from Playstore: