ಒಬ್ಬನೇ ಮಾಡಲಿ ಏನು ನಾ?
ನಿಸ್ವಾರ್ಥ ಬಣ್ಣಗಳವು
ಬಾನಲ್ಲಿ ಕಾಮನಬಿಲ್ಲ ಮೂಡಿಸಿವೆ
ಬಾಳಲ್ಲಿ ಸಂತೋಷವ ತಂದಿವೆ
ನಿಮ್ಮ ಅನಿಸಿಕೆ, ಅಭಿಪ್ರಾಯಗಳ
ಬಣ್ಣ ಅವುಗಳಿಗೆ ಬಳಿಯಬೇಡಿ.
ಹoಚ್ಚಿಕೊಂಡು ಬಣ್ಣಗಳ ಆಸ್ತಿಯಂತೆ
ಒಬೋಬ್ಬರ ಸಿದ್ಧಾಂತಗಳಿಗೆ,
ಅವರವರ ಧರ್ಮಗಳಿಗೆ,
ಹೇಳುತಿರುವೆವು ತುಂಬಿರಲಿ ಬದುಕು ಬಣ್ಣಗಳಿಂದ.
ನಾನೇನು ಎಲ್ಲವ ಮೀರಿನಿಂತ ಯೋಗಿಯಲ್ಲ,
ನನ್ನದೆಂಬ ಧರ್ಮವಿದೆ,
ಯಾವುದೋ ಸಿದ್ಧಾಂತಕೆ ಮನವು ಮರುಳಾಗಿದೆ
ಬಣ್ಣಗಳ ವ್ಯಾಪಾರಿ ನಾನೂಕೂಡ.
ಆಸೆಗಳು ನನ್ನವು ಸಹಜ ಮಾನವನಂತೆಯೇ,
ಆಸೆ ಇಲ್ಲ ಎನ್ನುವುದಕ್ಕೆ ನಾನೇನು
ಶರಣ, ಸಂತ , ಭುದ್ದನಲ್ಲ.
ನಡೆಯಿಲ್ಲದ ನುಡಿ ನಮ್ಮದೊಂದು,
ಜಂಜಾಟದಲಿ ಯಾವುದು ಸರಿ ಯಾವುದು ತಪೆಂದು
ತೂಗುವ ಪುರುಸೊತ್ತು ನಮಗಿಲ್ಲ.
ಒಬ್ಬನ್ನೇ ಮಾಡಲಿ ಏನು ನಾ?
ಬನ್ನಿ ಜೊತೆಗೆ ಸರಿಪಡಿಸಿಕೊಳ್ಳೋಣ್ಣ
ನಮ್ಮತನವನ್ನ.....
- MK Reddy
15 Mar 2017, 09:40 am
Download App from Playstore: