ಹೂವೇ ನಗುವ ಕನಸು ತಪ್ಪಲ್ಲ..

ಹೂವೇ ನಗುವ ಕನಸು ತಪ್ಪಲ್ಲ
ಆಗಲೇ ಬಿರಿಯುವ ತವಕ ಸರಿಯಲ್ಲ
ನಿನ್ನ ರೂಪು ರಂಗು ಮುಚ್ಚಿಡುವಂತಿಲ್ಲ
ಕಂಪಂತೂ ಹಿಡಿಯಲು ಸಿಗಲ್ಲ
ಪೆದ್ದು ನಿನಗೇನಿಷ್ಟೂ ಗೊತ್ತಿಲ್ಲ
ವನವೀಗ ಮೊದಲ ತರವಿಲ್ಲ
ಮಾಲಿಯೂ ನಿನ್ನ ಪರವಾಗಿಲ್ಲ
ಮುಳ್ಳಿಗೂ ನಿನ್ನ ರಕ್ಷಕನೆಂಬ ಅರಿವಿಲ್ಲ
ತಂಗಾಳಿಯೆಂದೂ ನಿನಗೆ ಆಪ್ತನಿರಲಿಲ್ಲ
ಈ ಕಾಣುವ ಹುಲ್ಲು ಹಸಿರುಂಟಲ್ಲ
ನಿನ್ನ ನೋವು ಯಾರಿಗೂ ತಿಳಿದಿಲ್ಲ
ಸರಿ ಇರುಳಿಗೇನೂ ತೋಚಿರಲಿಲ್ಲ
ಶುಭ್ರ ಸುಪ್ರಭಾತವೂ ಇಲ್ಲ...
ಅನು..

- Anu...

15 Mar 2017, 03:43 pm
Download App from Playstore: