ಹೊತ್ತಿಲ್ಲದ ಸಮಯದಲಿ....
ಹೊತ್ತಿಲ್ಲದ ಸಮಯದಲಿ....
ಗೊತ್ತಾಗದ ವೇಳೆಯಲಿ....
ದುತ್ತೆಂದು ಸುರಿಯುವಲೀ !
ಏನಾನಂದವೋ ನಮಗಿಲ್ಲೀ !!
ಏನು ಚಂದವೋ ಬಾನಿನಲ್ಲೀ !!
ಅಡಗಿರುವ ಧೂಳಿನಲ್ಲೀ...
ಎಲ್ಲಿಲ್ಲದಾ ಕಳೆ ....
ಕಟ್ಟುವನು ಛತ್ರಿರಾಯನು !
ಅವನ ಕರೆದೊಯ್ಯುವುದು ...
ಹರುಷದಾ ಆಟವದು ...
ಓಣಿಯಲೀ ಹರಿಯುತಿಹ...
ನೀರಿನ ಕಾಲುವೆಯಲ್ಲೀ...
ಇಳಿಬಿಟ್ಟಿಹ ದೋಣಿಗಳ -
ಸಾಲು..ತೇಲುತಿವೆ..ಮುಳುಗುತಿವೆ..
ಮಕ್ಕಳ ಚೆಲ್ಲಾಟದಲೀ !!
ಪಳಪಳನೆ ಹೊಳೆಯುವ...
ಮಿಂಚಿನಾ ನೋಟವು !
ಒಮ್ಮೊಮ್ಮೆ ಹೆದರಿಸುವಾ ...
ಸಿಡಿಲಿನಾ ಆರ್ಭಟವು !
ಆಚೀಚೆ ತೊಯ್ದ ಬಟ್ಟೆಯಲೀ..
ಚಳಿಚಳಿ ಎಂದೆನುತಲೀ...
ಮೊಣಕಾಲ ನೀರಿನಲ್ಲಿ...
ಕೆಸರಲ್ಲಿ ನಡೆಯುತಲೀ...
ಗೆಳೆಯರ ಜೊತೆ ಹರಟುತಲೀ...
ತೂತಾದ ಕೊಡೆಯಿಂದ ಬಿದ್ದ...
ಹನಿಗಳಿಂದ- ಚುಮುಚುಮು..
ಎನಿಸುವ ಕೆನ್ನೆಗಳ ಸುಖಾನುಭವಗಳ..
ಚಿತ್ರ....ಕಣ್ಮುಂದೆ ಬಂದರೇ....
ಆಹಾ!! ಜಗವೆಲ್ಲಾ ವಿಸ್ಮಯಾ !!
ಮೈಮರೆಸುವಾ ಆನಂದಮಯಾ !!
ಅನು....
- Anu...
15 Mar 2017, 07:57 pm
Download App from Playstore: