ತರುಣಿ

ತಂಗಾಳಿಯಲ್ಲಿ ತೇಲಾಡುತಿಹ ತರುಣಿ
ನಮಗಾಗಿ ಸ್ವಲ್ಪ ಕೆಳಗಿಳಿದು ಬಾರೆ ಧರಣಿ .
ಕವಿ ಕರೆದ ಕರೆಗೆ ಬಾರದಿದ್ದರೂ ನಿನಗಾಗಿ
ನಿನ್ತ ರವಿಕಿರಣ ಕರೆದಿದೆ ಬಾರೆ ತರುಣಿ .

ಎಲ್ಲೆಲ್ಲೊ ಓಡುವೆ ಹೇಗೇಗೊ ಆಡುವೆ .
ನನ್ನ ಕೈಗೆ ಸಿಗದೇನೆ ಮಂಜಲ್ಲಿ ಮಾಯವಾಗುವೆ.
ಅಷ್ಟೋOದು ಬೇಡವಾದನೇ ನಾನು .

ಓ ಮೇಘಮಾಲೇ ನಿನಗಾಗಿ ಈ ರೈತ
ಆ ಭಾನ ಕಡೆಗೆ ಕಣ್ಣೀರಿನ ಅಭಿಷೇಕ
ಮಾಡುತ ಕೈ ಚಾಚಿ ನಿOತಿಹನು.
ಬಾರೇ ಭುವಿಗಿಳಿದು ಅವನ ಹೊಟ್ಟೆ ತುOಬಲು.

ಧರೆಯಲ್ಲಿ ನಿನ್ನ ಆವಾಸ ಯೇಲ್ಲಿಲ್ಲ
ನೊOದ ಕಣ್ಣಲ್ಲಿ ,ಸಾಗರದ ಒಡಲಲ್ಲಿ,
ನದಿಯ ಮಡಿಲಲ್ಲಿ .....
ಪ್ರತಿಯೊOದು ಜೀವಿಯು ನಿನಗಾಗಿ
ನಿನಗೋಸ್ಕರ ,ನಿನ್ನಲ್ಲಿ .................

- ಚುಕ್ಕಿ

17 Mar 2017, 07:39 am
Download App from Playstore: