ಅಮ್ಮ ನಿನ್ನ ಒಡಲಾಳದಲ್ಲಿ...

ಅಮ್ಮ ನಿನ್ನ ನೆನಪುಗಳು ಕಾಡುತಿಹೆ ನನ್ನ
ಕ್ಷಣ ಕ್ಷಣ ಕಳೆದರು ಯುಗದಂತೆ ಹೋಗುತಿಹೆ
ನಿನ್ನ ನೋಡಲು ಈ ಮನ ಹಂಬಲಿಸಿ
ಪ್ರತಿದಿನ ನಿನ್ನ ಕನಸು ಕಾಣಿದೆ ಓ ಅಮ್ಮ

ಜೋಗುಳ ಹಾಡದು ಕಿವಿಗೆ ಇಂಪದು
ಜೊತೆಯಲಿ ನೀನಿರಲು ಜಗವನು ಮರೆವೆ ನಾ
ಜಗದೊಳಗೇನಿದೆ ನಿನ್ನಯ ಹೊರತುಪಡಿಸಿ
ಜಗವೆ ತುಂಬಿರಲು ನಿನ್ನಯ ಮಡಿಲೊಳಗೆ.

ನಿನ್ನ ಕರುಳಬಳ್ಳಿಯ ಕುಡಿಯು ನಾನು
ಆಸರೆ ಬಯಸುವೆ ನಿನ್ನಯ ಒಡಲೊಳಗೆ
ನಿನ್ನ ಕಾಣದೆ ಇನ್ನೂ ಕಂಬನಿ ತುಂಬಿರಲು
ಕಣ್ಣೇಕೊ ಕಾಣದೆ ಕಳೆದೋಗಿರುವೆ ನಾ

ಕಷ್ಟದ ಕಹಿ ಇಲ್ಲ ಸುಖದ ಸುದೆ ಎಲ್ಲ
ನಿನ್ನ ದುಃಖ ಮರೆತೆ ನೀ ನನ್ನ ನಗು ಬಯಸಿದೆ
ಮೂರೊತ್ತು ಕೈತುತ್ತು ತಿನಿಸಿದೆ ನೀ ನನಗೆ
ಮರೆಯಲಾರೆನು ಆ ಕೈತುತ್ತಿನ ಸುಖ

ನೂರಾರು ದೇವರು ಕಣ್ಮುಂದೆ ಬಂದರು
ಅಮ್ಮ ನಿನಗೆ ಸರಿಸಾಟಿ ಇಲ್ಲವರು
ನಿನ್ನಯ ನೋಡಲು ಬಂದರು ದೇವರು
ನಿನ್ನಯ ಮಮತೆಗೆ ದೇವರೆ ಸೋತರು
ಸೋತು ಶರಣಾಗಿ ಕೈಮುಗಿದರು..

- Irayya Mathad

17 Mar 2017, 12:51 pm
Download App from Playstore: