ಮರಳಿ ನೀ ಬರುವ ದಿನದಂದು.
ಮರಳಿ ನೀ ಬರುವ ದಿನದ
ನಿರೀಕ್ಷೆಯಲ್ಲಿ ಎಷ್ಟೂಂದು
ಸಡಗರ ಗೊಂಡಿದೆ ನನ್ನ ಮನ
ನಿನ್ನಿಗಿಷ್ಟದ ಸಂಗಂತಿಗಳ ಸಂತೋಷ
ಗಳ ಬೇಕು ಬೇಡಗಳ ಸಂಗ್ರಹದಿ
ಮೆಲುಕು ಹಾಕುತ್ತಿದೆ ಆ ದಿನಗಳ
ನೆನಪಿನ ಅಂಗಳದಿ ಅಡ್ಡಾಡುತ್ತಿದೆ
ನಿನ್ನ ಕಂಡ ಮೊದಲ ದಿನದ ಆಭೂತ
ಪೂರ್ವ ಆ ಕ್ಷಣ
ಅಯಸ್ಕಾಂತ ಸೆಳೆತದ ಕಂಗಳು
ಕೆಂಪು ರಂಗಿನ ತುಟಿಗಳು ಹೊಂ
ಬಣ್ಢದ ಕದಪುಗಳು
ಅಂದದ ಮೊಗದಲ್ಲಿ ಪೂರ್ಣ
ಚಂದಿರನ ಕಳೆ ತುಂಬಿಕೊಂಡಿದ್ದ
ಚಂದ್ರಮುಖಿ
ಸೌಂದರ್ಯದ ಗಣಿ ನೀ ಅಂದೇ
ಆದೆ ನನ್ನ ಎದೆ ಅರಮನೆಯ
ಮಹಾರಾಣಿ.....
ಅನು...
- Anu...
17 Mar 2017, 02:10 pm
Download App from Playstore: