ಬರಹ ರಾಗ

ಮನಸಿನ ತುಂಬ ನೀನೇ ನೀನೇ
ಗೀಚಿದೆ ಪ್ರೀತಿಯ ಬರಹದ ಸಾಲು!!
ಹೃದಯದ ತುಂಬಾ ನೀನೇ ನೀನೇ
ನುಡಿಸಿದೆ ಪ್ರೀತಿಯ ರಾಗದ ಹಾಡು!!

ಗೀಚಿದ ಆ ಸಾಲಿಗೆ
ಬೆರೆಯಿತು ಈ ರಾಗ!!
ಹಾಡಿದ ಆ ಹಾಡಿಗೆ
ಮಿಡಿಯಿತು ಅನುರಾಗ!!

ಇಂದು ನಿನ್ನ ಸೇರೋ
ಬಯಕೆಯಿಂದ ಬರೆದ ಸಾಲು!!
ನಿನ್ನ ವಿನಹ ಬೇರೆ ಇಲ್ಲ
ಎಂದೂ ನುಡಿದ ರಾಗ!!

ನಿನ್ನ ಹೆಸರು ಗೀಚಿ
ಕಲ್ಪನೆಗಳ ಬರೆದು ನುಡಿದಮೇಲೆ
ಆಗಿ ಹೋಯ್ತು ಬರಹ
ಸ್ವರದಿ ಬೆರೆತು ಪ್ರೇಮ ರಾಗ!!

- ಪಿ.ಜಿ.ಜ್ಯೋತಿ

17 Mar 2017, 06:34 pm
Download App from Playstore: