ಹೃದಯದ ಸಂಗಾತಿ

ಹಣೆಯ ಮೇಲೆ ಮುತ್ತಿಟ್ಟು ಮೋದಲ ಬಾರಿ ತಿಳಿಸಲೇ ರೇಖಾ ಹುಟ್ಟು ಹಬ್ಬದ ಶುಭಾಶಯಗಳೆಂದು .......

ಹೇಗೆ ಬಣ್ಣಿಸಲಿ ನನ್ನೆದೆಯಾಳದ ಪ್ರೀತಿಯನ್ನ ಬಚ್ಚಿಡಲಾಗುತ್ತಿಲ್ಲ ನಿನ್ನೆದುರು ನನ್ನ ಪ್ರೀತಿಯನ್ನ......

ಒಂದು ಬಾರೀ ಅಪ್ಪಿ ಬಿಡಲೇನು ನಿನ್ನ ಮನಸಲ್ಲೀನ ಪ್ರೀತಿ ಕಾಣಲು ಬಿಸಿ ಉಸಿರ ತಾಪದಲ್ಲಿ ......

ನಿನ್ನ ಆ ನೋಟ ನನ್ನನ್ನೇ ನುಂಗಿ ಮುದ್ದಿಸುತ್ತಿತ್ತು, ಉಸಿರಿಗೆ ಜೀವವಾಗಿ ನಿನ್ನ ಉಸಿರು ನಿಂತಿತು ನನ್ನಲ್ಲಿ.......

ಕಣ್ಣಂಚಿನಲ್ಲಿ ಕುಳಿತ ಪ್ರೀತಿ ಕೈ ರೇಖೆಯಲ್ಲಿ ಬೆರೆತು ನಿನ್ನ ಸ್ಪರ್ಶಿಸಲು ಕಾಯುತಿಹುದು ಓ ನನ್ನ ಒಲವೇ......

ನನ್ನ ತೋಳ್ಬಲದಲ್ಲಿ ನಿನ್ನ ಬಿಗಿದಪ್ಪಿ ನನ್ನ ಹೃದಯದ ಪ್ರೀತಿಯನ್ನು ನಿನ್ನ ಹೃದಯಕ್ಕೇ ತಿಳಿಸುವೇ......

ಕರಗಿ ಹೋಗದಿರು ನನ್ನ ಪ್ರೀತಿಯ ಮಳೆಯಲಿ ಜೀವಿಸುತ್ತಿರು ನನ್ನ ಹ್ರುದಯದ ಅರಮನೇಯಲಿ ಎಂದಿಗೂ ನನ್ನಲ್ಲಿ ಉಸಿರಾಗಿ ಸಂಗಾತಿ..........

ನಿನ್ನ ಸಿಹಿ ಮುತ್ತಿನ ಮತ್ತಲ್ಲೆ ನಿನ್ನ ನೇನೆದು ನನ್ನ ಕನಸಿನ ರೆಪ್ಪೆಯಾಗಿ ನೀನಿರಲೂ ನನ್ನ ಜೀವವೇ ಸುಂದರ......

ನಿನ್ನ ಬಲಗಾಲ ಮೇಲೆ ಮುತ್ತಿಟ್ಟು ,ಎಡಗಾಲ
ಕಿರು ಬೆರಳಿಗೊOದು ಚುಕ್ಕಿಯನಿಟ್ಟು ದ್ರುಷ್ಟಿ ತೆಗೆಯಳೆ ಮುದ್ದು ಗೆಳತಿ .........

ಪ್ರತಿದಿನ ನನ್ನ ಪ್ರೀತಿಯ ನಿನಗೆ ತಿಳಿಸದೇ ಇರಬಹುದು .
ಆದರೇ ನನ್ನ ಮಾತಲ್ಲೂ ,ಮನಸಲ್ಲೂ ನೀನೆ
ಕನಸಲ್ಲೂ, ಕಣ್ಣಲ್ಲೂ ನೀನೆ ನನ್ನಲ್ಲೂ ನೀನೇ ...................

- ಚುಕ್ಕಿ

18 Mar 2017, 06:54 pm
Download App from Playstore: