ಹೇಳು ನೀನು

ಒಮ್ಮೆ ಹೇಳು ನೀನು ನನಗೆ
ಏಕೆ ಹೀಗೆ ಮಾಡಿದೆ!!
ಪ್ರೀತಿಯಲ್ಲಿ ತುಂಬಿದ ನಗೆ
ಇಂದು ಯೇಕೆ ಮಾಸಿದೆ!!

ಮನದಿ ಮೂಡೋ ಸಾಲು ಪ್ರಶ್ನೆಗೆ
ಕೊಡಲಿ ಯಾವ ಉತ್ತರ!!
ಮೌನ ಮುರಿದು ಮಾತನಾಡಲು
ಬರುವುದಿಲ್ಲ‌ ಈ ಸ್ವರ!!

ನಿನ್ನ ಮರೆತು ಬಾಳಲಾರದೇ
ಚಡಪಡಿಸುತ್ತಿದೆ ಈ ಮನ!!
ನಿನ್ನ ಒಲವಿಗಾಗಿ ತಾನೇ
ಕಾದಿರುವುದು ಜೀವನ!!

ಒಂದು ಬಾರಿ ಬಂದು ಹೇಳು
ಹುಸಿಯಲ್ಲ ಈ ದಿನ!!
ನೀನು ನನ್ನ ಜೊತೆಯಲೇ ಇರು
ಮುಂದೆ ಬರುವ ಅನುದಿನ!!

- ಪಿ.ಜಿ.ಜ್ಯೋತಿ

21 Mar 2017, 10:46 am
Download App from Playstore: