ಭಕ್ತಿಯ ಅನಾವರಣ
ಕೈಲಾಸೆಶ್ವರನೇ
ನಿನ್ನ ಬಲ್ಲವರಾರು?
ಆಡಂಬರದ ಭಕ್ತಿಯಲ್ಲಿ
ಅಡಗಿಸಿ ಭಜಿಸುವರು ನಿನ್ನ
ವರುಷಕ್ಕೊಮ್ಮ
ಲಿಂಗೇಶ್ವರನೇ
ನಿನ್ನ ಬಲ್ಲವರಾರು?
ಭಯ ತುಂಬಿದ ಭಕ್ತಿಯಲಿ
ಸುತ್ತುತ್ತ , ಭಜಿಸುವರು ನಿನ್ನ
ಸಂವತ್ಸರಕ್ಕೊಮ್ಮೆ
ಅಧ್ರನಾರೇಶ್ವರನೇ
ನಿನ್ನ ಬಲ್ಲವರಾರು?
ಜಿದ್ದಿನ ಹಣಾಹಣಿಯಲ್ಲಿ ,ವೈರಿಯ
ಕೋಡುಮುರಿಯಲು ಭಜಿಸುವರು
ನಿನ್ನ ವರ್ಷಕ್ಕೊಮ್ಮೆ
ವಿಶ್ವನಾಥನೇ
ನಿನ್ನ ಬಲ್ಲವರಾರು?
ಮದ್ಯಾದಿ ವ್ಯಸನಗಳ, ತೊರೆದು
ಭಜಿಸುವರು ತೋರಿಕೆಯ ಭಕ್ತಿಯಲ್ಲಿ
ಒಂದುದಿನಕ್ಕೆ ಮಾತ್ರ
ವೈಕುಂಠೇಶ್ವರನೇ
ನಿನ್ನ ಬಲ್ಲವರಾರು?
ಮಲಿನ ತುಂಬಿದ ಮನಸ್ಸನ್ನು
ಮಡಿಯುಟ್ಟು ಭಜಿಸುವರು ನಿನ್ನ
ದಿನವಿಡೀ ವರ್ಷಕ್ಕೊಮ್ಮೆ
ವಿಷಕಂಠೇಶ್ವರನೇ
ನಿನ್ನ ಬಲ್ಲವರಾರು?
ಉಳ್ಳವರನ್ನು ಉಪ್ಪರಿಗೆಗೆ ಏರಿಸಿ
ಸನ್ಮಾನಿಸಿ ನಾಮಮಾತ್ರದಲಿ ನಿನ್ನ
ಜಪಿಸುವರು ವರ್ಷಾಂತ್ಯದಲ್ಲಿ
ಶಾರದ
- ಶಕುಂತಲಾ
22 Mar 2017, 04:40 pm
Download App from Playstore: