ಅನ್ನವಾಗದ ಕವಿತೆಯ ಪದಗಳು

ನಾ ಕವಿತೆ ಬರೆಯುವಾಗೊಮ್ಮೆ
ಆಕಾಶದ ನೀಲಿ ಕಪ್ಪಿಡುತ್ತದೆ!
ಸೊಂಟ ಮುರಿದುಕೊಂಡ ಕಾಮನಬಿಲ್ಲು
ಅಧ೯ ಚಂದ್ರನ ತುದಿಗೆ ನೇಣು ಬಿಗಿದುಕೊಳ್ಳುತ್ತದೆ!

ಹಸಿದ ಹೊಟ್ಟೆಗೆ ಅಗುಳು ಅನ್ನವಾಗದ
ನನ್ನ ಕವಿತೆಯ ಪದಗಳು
ಉರಿಯೋ ಸೂಯ೯ನಿಗೆ ಕೆಂಡವಾಗುತ್ತವೆ!
ನಕ್ಷತ್ರಗಳು ಎದೆಯಿರಿಯುವ ಸಿಟ್ಟಿನಲಿ
ಅಲ್ಲಿಂದಲೇ ಕಣ್ಣು ಕೊರೆಯುತ್ತವೆ!

ನಾ ಕವಿತೆ ಬರೆಯುವಾಗೊಮ್ಮೆ
ಹೂವು ಗಭ೯ಪಾತಕ್ಕೊಳಗಾಗುತ್ತದೆ!
ನೊಂದವರ ಸತ್ತ ಕಣ್ಣುಗಳೊಳಗೆ
ಬೆಳದಿಂಗಳ ಬಿತ್ತದ ನನ್ನ ಕವಿತೆಯ ಕಂಡು
ದೀಪದ ಬತ್ತಿ ಬಾಣವಾಗಿ ನಾಟುತ್ತದೆ
ಅದರೊಳಗಿನ ಎಣ್ಣೆ ಉಸಿರುಗಟ್ಟಿಸಿ ಕೊಲ್ಲುತ್ತದೆ!

- ಮಾದು ಜಗದಾಳ (ಚಿಮ್ಮಡ )

- ಮಾದುಜಗದಾಳ

22 Mar 2017, 09:42 pm
Download App from Playstore: