ಪ್ರಾತ:ಕಾಲ

ಬೆಚ್ಚನೆಯ ಹೊದಿಕೆಯನು
ಬೇಸರದಿ ತೆಗೆದು ‌
ಕಷ್ಟದಿ ಕಣ್ಣುಜ್ಜುತ
ನಿನ್ನ ನಾಮವ ನೆನೆದು

ಜೀವನವೆ ಯಂತ್ರವಾಗಿ
ಸೃಜನಶೀಲತೆ ಮರೆಯಾಗಿ
ಮನಸ್ಸು ಭಾರವಾಗಿ
ತಲೆಯೊಂದು ಚಿಂತೆಗೂಡಾಗಿ

ಮೂಡಣವು ಮೌನವಾಗಿ
ಬೆಳಗುತಲಿದೆ
ತರು-ಲತೆಗಳು ಮುತ್ತಿನಾರದಿ
ಹೊಳೆಯುತಲಿವೆ

ಬಾನಂಗಳಲಿ ಬೆಳ್ಳಕ್ಕಿಯ
ಸಾಲು.…ಸಾಲು....
ಭಾನಿಗೆ ಆರತಿ ಬೆಳಗುತ್ತ
ಸಾಲು....ಸಾಲು....

ಕೋಟಿ ನಾಮವ ಹೊತ್ತ
ನಿನ್ನ ಜಪಿಸುತ್ತ ನಾವು
ಮುಂದಡಿ ಇಡುತ್ತ
ದಿನದ ಆಧಿಯತ್ತ

ಅಕ್ಕರದಿ ಅಡಿಗೆ ಮಾಡುತ್ತ
ಸಕ್ಕರೆಯ ನುಡಿಯನಾಡುತ್ತ
ಮನೆ-ಮನವ ತೊಳೆಯುತ್ತ
ಬೆಳಗುತಿರುವಳು ಅವ್ವಾ....


-ಶಾರದ

- ಶಕುಂತಲಾ

24 Mar 2017, 03:25 am
Download App from Playstore: