ಕುಣಿವ ಹೃದಯ

ಕುಣಿಯುವ ಹೃದಯವದು
ಕುಣಿದಿದೆ ನಿನ್ನ ಕಂಡು!!
ಮಿಡಿಯುವ ಸ್ವರದಲದು
ಕರೆದಿದೆ ನಿನ್ನನ್ನು ಇಂದು!!

ವಲಿಯುವ ಬಯಕೆಯಲಿ
ವಲಿದು ಬಾ ನನ್ನವಳೇ!!
ಸಂಭಾವನೆ ಇಲ್ಲದ
ದಾಸ ನಾ ನಿನ್ನವನೇ!!

ಮೊದಲನೋಟದಲ್ಲೇ ನೀನು
ಸೆಳೆದುಕೊಂಡೆ ನನ್ನನ್ನು!!
ಕಳೆದು ಹೋದ ನನ್ನನ್ನು ಈಗ
ಹುಡುಕಲಿ ನಾ ಎಲ್ಲಿ!!

ನಿಲ್ಲಲಾರೆ ಭೂಮಿಯ ಮೇಲೆ
ತೇಲಿ ನಡೆವೆ ಗಾಳಿಯ ಮೇಲೆ!!
ಇಲ್ಲ ಹಿಡಿತ ಮನಸಿನ ಮೇಲೆ
ಮರೆತೆ ಇಂದು ನನ್ನನ್ನು ನಾನೇ!!

- ಪಿ.ಜಿ.ಜ್ಯೋತಿ

24 Mar 2017, 09:09 am
Download App from Playstore: