ಬಿತ್ತನೆ ಬೆಳೆ

ಹೊಲದಲ್ಲಿ ಮಣ್ಣ ಉತ್ತಿ
ನೆಲದಲ್ಲಿ ಭತ್ತ ಬಿತ್ತಿ
ಹೊನ್ನಿನ ಬೆಳೆ ಬೆಳೆಯುವ
ಬೆಳೆಯುವ ನಾವು ಬೆಳೆಯುವ!!

ಬಾನಿಂದ ಮಳೆಯನಿತ್ತು
ಭೂಮಿಲಿ ಹಸಿರನಿತ್ತ
ಆ ದೇವರ ಇಂದು ನೆನೆಯುವ
ನೆನೆಯುವ ನಾವು ನೆನೆಯುವ!!

ನೆಲದಲ್ಲಿ ಫಲವ ಪಡೆವ
ಭಾಗ್ಯವ ನಮಗೆ ಕೊಟ್ಟ
ಭೂ ತಾಯಿಗೆ ನಾವು ನಮಿಸುವ
ನಮಿಸುವ ನಾವು ನಮಿಸುವ!!

ಸಿರಿ ಸಂಪತ್ತು ತುಂಬಲಿ
ತುಂಬಿ ತುಳುಕಾಡಲಿ
ಸಂತಸದಿ ಕುಣಿದು ನಲಿಯುವ
ನಲಿಯುವ ನಾವು ನಲಿಯುವ!!

ಭತ್ತದ ಗಿಡ ಬೆಳೆದು
ತೆನೆದೂಗಿ ನಲಿವಾಗ
ಸಂತಸದಿ ಪದವ ಹಾಡುವ
ಹಾಡುವ ನಾವು ಹಾಡುವ!!

ಏನಿಲ್ಲ ಯೇಕಿಲ್ಲ
ಎಂಬುದು ನಮಗಿಲ್ಲ
ಶ್ರಮದಿಂದ ಕೂಡಿ ದುಡಿಯುವ
ದುಡಿಯುವ ನಾವು ದುಡಿಯುವ!!

- ಪಿ.ಜಿ.ಜ್ಯೋತಿ

24 Mar 2017, 10:40 am
Download App from Playstore: