ನನ್ನ ಹೃದಯ
ನನ್ನ ಹೃದಯ ಎಲ್ಲಿ ಜಾರಿ ಬಿತ್ತು
ಬಹುಶಃ ನಿನ್ನ ನಗುವಲ್ಲಿ
ಕಳೆದೊಗಿದಿಯೇನೋ...!!!
ಬಾರೆ ಮರಳಿ ಹೃದಯವೇ
ನಾನೆಗೊ ಅವನಲ್ಲೇ ಮರೆಯಾಗಿರುವೆ
ನೀನಾದರು ನನ್ನಲ್ಲಿರು...!!!
ಅವನ ಒಂದು ನೋಟಕ್ಕೆ ನಾ ಮನಸೋತೆ .
ಅವನಂದ ಒಂದು ಮಾತಿಗೆ
ನನ್ನ ಜೀವವೇ ಕೊಟ್ಟೆ...!!!
ನನ್ನ ಮೇಲೆ ನನಗೇ ಇಲ್ಲದ
ನಂಬಿಕೆ ಅವನಲ್ಲಿ ನಾ ಕಂಡೇ.
ನಾನಂದೇ ಒಂದು ಮಾತು ಅವನಲ್ಲಿ.....!!!
ನಾ ಕೇಳಿದೆ ಅವನಿಗೆ ನಾನೆದಾರು ತಪ್ಪು
ಮಾಡುತಿರುವೆನಾ ಎಂದು........
ಅವನಂದ ನನ್ನ ಹೃದಯ ಎಂದಿಗೂ
ಯಾವ ತಪ್ಪು ಮಾಡಲ್ಲವೆಂದು...!!!
ಕಂಬನಿಯು ನನ್ನ ಕೆನ್ನೆಯ
ಮೇಲೆ ನಿಂತಿತ್ತು ನೋವಿನಿಂದಲ್ಲ...
ನನಗಾಗಿ ಒಬ್ಬರಿರುವರೆಂಬ ಸಂತೋಷದಿಂದ...!!!
- ಚುಕ್ಕಿ
24 Mar 2017, 10:59 am
Download App from Playstore: