ಕನಸಿನ ರಾಜಕುಮಾರ
ಹೃದಯದ ಬಾಗಿಲಿಗೆ ತೋರಣವೆ ನೀನು
ಕನಸಿನ ಲೋಕಕೆ ಮಾಹಾರಾಜನೆ ನೀನು
ಮತ್ತೆ ಮತ್ತೆ ಹಾಡುವೆ ನಿನ್ನ ಜೊತೆಗೂಡಿ...ಪ
ಯಾವುದೋ ಲೋಕವೂ ಯಾವುದೋ ಶಾಕವೂ
ನನ್ನಯ ಮನಸಿಗೆ ಬಿಸಿಗಾಳಿ ತಾಕಿದೆ
ನಿನ್ನೊಲಗೂಡುವ ಇರಾದೆ ಮೂಡಿದೆ
ಹೂವಿನ ಹಾಗೆ ನಾ ನಾಚುತಲಿರುವಾಗ
ದುಂಬಿಯಾಗಿ ನೀ ಬರಲು ಮೈಮನ ಮರೆತೆ ನಾ
ಮರೆತು ಬೆರೆತೆ ನಾ ನಿನ್ನಲ್ಲಿ ಜೇನಾಗಿ
ನಿನ್ನ ಪ್ರೀತಿಗೆ ಸರಿಸಾಟಿ ಇಲ್ಲ ಏನೂ
ಬೇರೆನು ಬೇಡೆನು ಆ ದೇವ ನಾನಿನ್ನೂ
ಬಳಿಯಲಿ ನೀನಿರಲು ಬದುಕೆ ಬಂಗಾರವೂ
ನನ್ನ ಈ ಜಗದಲಿ ತುಂಬಿರುವೆ ನೀನು
ಒಂಟಿಯಾಗಿರಲು ನಾ ಬಯಸೆನು ಇನ್ನೆಂದು
ಕಣ್ಣಲ್ಲಿ ಕಣ್ಣಾಗಿ ನೀನೆ ತುಂಬಿರಲು...
- Irayya Mathad
25 Mar 2017, 01:47 pm
Download App from Playstore: