ಅರಿವು

ಬೆಲ್ಲದ ರುಚಿಯ ಬಲ್ಲದವರಾರು
ಪ್ರೀತಿಯ ಆಳವ ತಿಳಿಯದವರಾರು..
ಕಾಣದ ದಾರಿಯ ಹುಡುಕದವರಾರು
ಗುರು ಇರದ ವಿದ್ಯೆಯ ಕಲಿತವರಾರು..
ನಿದ್ದೆ ಮಂಪರಿನಲಿ ತೊದಲದವರಾರು
ಕನಸಿನ ಲೋಕದಲಿ ವಿಹರಿಸದವರಾರು..
ನಡೆವಾಗ ಎಡವಿ ಬೀಳದವರಾರು
ಅತ್ತಾಗ ಕಣ್ಣೀರು ಹರಿಸದವರಾರು..
ತಾಯಿಗಿಂತ ಮಿಗಿಲಾದವರಾರು..
ಅಂತರಂಗದೊಳು ದೇವರ ಕಾಣದವರಾರು..||

- ನಮಿತ ಗಟ್ಟಿ

25 Mar 2017, 10:59 pm
Download App from Playstore: