ದೂರವಾಣಿ(ಮೊಬೈಲ್)

ನೀ-ನಿಲ್ಲದ ಮನೆಯಿಲ್ಲ
ನಿನಗೊಲಿಯದ ಮನವಿಲ್ಲ
ಜಗವೆ ಇರುವುದು ನಿನ್ನಲ್ಲಿ
ನೀ-ಇರುವೆ ಎಲ್ಲರ ಅಂಗೈಯಲ್ಲಿ

ರವಿ ಕಿರಣ ಧರೆ ತಾಗುವ ಮುನ್ನ
ನೀ-ತೆರೆಸುವೆ ಎಲ್ಲರ ಕಣ್ಣ
ಹಿಂದೆ ಎದ್ದಾಗ ದೈವ ಧಶ್ರನ
ಇದೀಗ ಎಲ್ಲರಿಗು ನಿನ್ನದೆ ಆಲಿಂಗನ

ಒಳಿತು-ಕೆಡಕುಗಳ ಆಗರ ನೀನು
ಜೀವನದ ಪಾಠ ಕಲಿಸುವೆ ನೀನು
ದಾರಿ-ತಪ್ಪಿದರೆ ಮಣ್ಣಾಗುವೆ ನಾನು
ಅಭಿವೃದ್ದಿಯ ಜೀವಾಳ ನೀನು

ದೂರದವರನ್ನು ಹತ್ತಿರವಾಗಿಸುವೆ
ನಮ್ಮನ್ನೆ -ನಮ್ಮವರಿಂದ ದೂರಗೊಳಿಸುವೆ
ವಾಸ್ತವತೆಗೆ ನಮ್ಮನ್ನು ದೂರವಿರಿಸುವೆ
ನಿನ್ನ ಮಹಿಮೆಯ ತೋರಿ ,ಜಗವನಾಡಿಸುವೆ


ಶಾರದ

- ಶಕುಂತಲಾ

26 Mar 2017, 10:48 am
Download App from Playstore: