ನೆನಪಿಡಲೇ
ನಗುತ್ತವೆ ನನ್ನ ನಯನಗಳು
ನಿನ್ನ ನೋಡಿದ ತಕ್ಷಣ.
ನಗುವ ಚೆಲ್ಲಿ ನೀರಾಗಿ ನನ್ನನ್ನೇ
ಮುದ್ದಾಡಿಹೋಗುತ್ತವೆ ನೀನಾಗಿ............
ನೆಲಕ್ಕೆ ಜಾರದೆ ನನ್ನ ಹೃದಯವನ್ನು
ಸ್ಪರ್ಶಿಸಿ ಚಿಪ್ಪಿಲ್ಲದ ಸ್ವಾತಿ
ಮುತ್ತಾಗುತ್ತವೆ .
ನಿನ್ನ ಎದೆಯ ಸೇರುತ್ತವೆ.
ಕಂಬನಿ ಎಂದು ಹೆಸರಿಡಲೇ
ನನ್ನ ಸಂತಸದ ಚೆಲುವಾಗಿ
ನೆನಪಿಡಲೇ............
- ಚುಕ್ಕಿ
26 Mar 2017, 01:04 pm
Download App from Playstore: