ವಿರಹದ ಇರುಳು

ಬೆಳಗುತಿರುವ ಹಣತೆ ನೀನೆ ನನ್ನ ಗೆಳತಿ
ಅರಳುತಿರುವ ಕಮಲ ನಿನ್ನ ಕಡೆಗೆ ನನ್ನ ಗಮನ!!
ನೀ ದಾರದಲ್ಲಿ ಪೋಣಿಸಿರುವ ಮುತ್ತ ಮಾಲೆ
ನಾ ಧರಿಸಿಕೊಳ್ಳಲು ಬಳಸ ಬಾ ನೀ ನನ್ನ ಕೊರಳ!!

ನೀ ಗಗನದಲ್ಲಿ ಮಿನುಗುವ ತಾರೆಯೇನು
ನಾ ಬಳಿಗೆ ಬರಲು ಹೇಳು ನೀ ದಾರಿಯನ್ನು!!
ತಿಳಿಯದೇ ನಿನ್ನನು ನಾನು ಪ್ರೀತಿಸಿ ಬಿಟ್ಟೆನು
ವಿರಹದ ಬಾಗಿಲ ಎದುರು ಕಾಯುತ್ತ ನಿಂತೆನು!!

ನನ್ನ ಬಾಳ ಬಂಗಾರದ ಅರಮನೆಗೆ ರಾಣಿ ನೀನು
ಬರಬೇಕು ಬಲಗಾಲನ್ನಿಟ್ಟು ಒಮ್ಮೆ ನೀನು!!
ನೀ ಕಳೆಯ ಬಾರೇ ಇಂದು ಈ ಏಕಾಂಗಿಯ ಬದುಕಲಿ ಕವಿದಿರೋ ಈ ವಿರಹದ ಇರುಳ !!

- ಪಿ.ಜಿ.ಜ್ಯೋತಿ

27 Mar 2017, 09:36 am
Download App from Playstore: