ವಿರಹದ ಬೇಗೆ

ನನ್ನ ಕಣ್ಣುಗಳು ಕೈಗೊಂಡಿದೆ ಬೇಹುಗಾರಿಕೆಯನ್ನು
ಆದರೆ ಅದು ಹುಡುಕುತ್ತಿರುವುದಾದರು ಏನನ್ನು
ನಿನ್ನ ಕಂಡು ಕಾಣದೇ ಕಣ್ಮರೆಯಾದ ಕಣ್ಣುಗಳನ್ನ?
ಅಥವಾ ನಕ್ಕು ನೆನೆಗುದಿಗೆ ಬಿದ್ದ ನಿನ್ನ ತುಟಿಗಳನ್ನ?
ಅಥವಾ ಮುತ್ತುದುರಿಸಿ ಮರೀಚಿಕೆಯಾದ ನಿನ್ನ ಮಾತುಗಳನ್ನ?
ತಿಳಿಯುತ್ತಿಲ್ಲ ಗೆಳತಿ ಇದಾವುದೂ ನನಗೆ
ಆದರೆ ತಟ್ಟುತ್ತಿರುವುದಂತೂ ನಿಜ ನಿನ್ನ ಕಾಣದ ವಿರಹದ ಬೇಗೆ
ತಿಳಿದಿಲ್ಲ ಎಂದು ಒಂದು ಮಾಡುವುದೋ ನಮ್ಮಿಬ್ಬರನ್ನು ಪ್ರೀತಿ ಬೆಸುಗೆ.....‌‌.

- ಅಕವಿ

27 Mar 2017, 08:00 pm
Download App from Playstore: