ಕರಗುವ ಮುನ್ನ ಈ ಕ್ಷಣ

ಕರಗುವ ಮುನ್ನ ಈ ಕ್ಷಣ
ಕಳೆದುಬಿಡುವೆ ನನ್ನ ಪೂರ್ತಿ ಜೀವನ
ಶಿಲೆಯಾಗುಳಿವ ನನ್ನೀ ಹೃದಯದಾಣೆಗೂ.

ಕಣ್ಣುಗಳಾಗಿವೆ ಸಾಗರ
ಕನಸುಗಳಾಗಿ ಹುಕ್ಕುತ್ತಿದೆ ಅವಳ ಜ್ಞಾಪಕ
ಕನಸೇ ಇಂದು ಕಣ್ಣೀರಾಗಿ ಕಡಲ ಸೇರಲು.

ಓಟಕೆ ಇಳಿದು ಸುಸ್ತಾದ ಒಂದು ನದಿ ನಾನು
ಯಾವ ಸಣ್ಣ ತೀರಕೊ ಹತ್ತಿರವಾಗದೇ ಹೋದೆನು
ನಿದ್ರೆಯ ದಾಟಿ ಮುನ್ನಡೆದ ಒಂದು ಕನಸು ನಾನು
ಯಾವ ಕಣ್ಣ ಕನ್ನಡಿಯಲೂ ಪ್ರತಿಬಿಂಬವಾಗದೇ ಹೂದೆನು.

ನನ್ನ ಪ್ರೀತಿಯೇ ಇಂದು ಸ್ನೇಹವಾಗಿ ಹೋಯ್ತೆ?
ನನ್ನ ಬದುಕೇ ಒಂದು ಪ್ರಶ್ನೆಯಾಗಿ ಹೋಯ್ತೆ?

ಇಂದು ಈ ಸಂಬಂಧಕೆ ಒಂದು ಹೆಸರಿದೆಯೇ?
ಈ ಗುಟ್ಟನು ಬಿಡಿಸಲು ಸಾಧ್ಯವಿದೆಯೇ?

--(ತೆಲುಗು ಚಿತ್ರಗೀತೆಯೊಂದರ ಅನುವಾದ)

- ಅಕವಿ

29 Mar 2017, 08:39 pm
Download App from Playstore: