ನನ್ನವಳ ಸೌಂದರ್ಯ
ಹೇ ಪ್ರಿಯ ಹೃದಯವೇ ..!!
ಚಂದಿರನಿಗೊಂದು ಸವಾಲನ್ನ
ಹಾಕಿ...ನಿನಗಿಂತ ಚೆಂದ ನನ್ನ ಹೃದಯ
ದೇವತೆಯೆಂದೆ...?
ಅದೊಂದು ದಿನ ತುಂಬು ಹೊಳಪಿಂದ
ಬಾನಂಗಳಕೆ ಬಂದ..!
ಕೇಳಿದರೇ...ಹುಣ್ಣಿಮೆಯೆಂದ...!!
ಒಂದು ಕ್ಷಣ..ನನ್ನವಳ ಸೌಂದರ್ಯ
ನೋಡಿ...ಮೋಡದ ಮರೆಯಲ್ಲೆಲ್ಲೋ
ಬಚ್ಚಿಟ್ಟುಕೊಂಡ..?
ಕೇಳಿದರೇ...ಮಳೆಗಾಲವೆಂದ...!!
ನಾ..ಅಂದು ಕೊಂಡೆ...?
ಬಹುಶಃ ಎಲ್ಲೋ ಹೊಟ್ಟೆ
ಕಿಚ್ಚಿರಬೇಕೇನೋ ಅಂತ...!!
- basavarajsirnayakpreethu
30 Mar 2017, 08:37 am
Download App from Playstore: