ಬಿಸಿಯಾಗಿದೆ ಉಸಿರು
ಬಿಸಿಯಾಗಿದೆ ಉಸಿರು
ನಿನ್ನ ಕುಡಿಗಣ್ಣ ಶಾಖಕಿಂದು
ಬಸಿರಾಗಿದೆ ಹೃದಯ
ಪ್ರೀತಿ ಶಿಶುವಿಗೆ ಜನ್ಮ ನೀಡಲೆಂದು
ಮನಸಾಗಿದೆ ಸಿಹಿ ಮೊಸರು
ನೀ ಕಡೆಗೋಲಿಟ್ಟು ಕಡಿದು
ಕನಸಾಗಿದೆ ಕೆಸರು
ನಿನ್ನ ನಗುವಿನ ಕಮಲ ಚಿಗುರೊಡೆದು
ಹಸಿರಾಗಿದೆ ಪ್ರಣಯ
ನಿನ್ನ ತುಟಿಯಿಂದ ಸುರಿದ ಮುತ್ತಿನ ಮಳೆ ಕಂಡು
- ಅಕವಿ
31 Mar 2017, 02:37 pm
Download App from Playstore: