ನಡೆ ಮುಂದೆ

ನಡೆ ಮುಂದೆ ನೀ
ಹಿಂತಿರುಗಿ ನೋಡದೆಲೆ
ಸಾವಿನ ಮನೆಯ ಹೊಸ್ತಿಲಿಗೆ
ನೀ ಹೋಗಿ ಸೇರುವ ವರೆಗೆ...

ಇಟ್ಟು ನಡೆ ದಿಟ್ಟ ಹೆಜ್ಜೆ
ಅಂಜದೆಲೆ ನಡೆದಂತೆ ಗಜ ಪಡೆ
ಊಳಿಡಲಿ ನೂರು ನಾಯಿಗಳ ಹಿಂಡು
ಸಹಿಸದೆಲೆ ನಿನ್ನೇಳಿಗೆಯನು ಕಂಡು
ಜಗ್ಗದಿರು ಕುತಂತ್ರಿಗಳ ಕಾಟಕ್ಕೆ
ಕೂರದಿರು ಸುಖ ರಸದೂಟಕ್ಕೆ.

ಆಗಿದ್ದು ಸಾದಿಸು
ಆಗದ್ದು ದೂರ ಬಿಸುಟು
ಅಹೋರಾತ್ರಿ ಶ್ರಮಿಸು
ಮೀಟುತ್ತಿರು ಬದುಕ ದೋಣಿ ಹುಟ್ಟು.
ಅದರಲ್ಲೇ ಇಹುದು
ಬಾಳ ಪಯಣದ ಗುಟ್ಟು.

- ಶ್ರೀಗೋ.

01 Apr 2017, 09:45 pm
Download App from Playstore: