ನಮ್ಮ ಜವಾಬ್ದಾರಿ ಯಾರದು
ಇಷ್ಟ ಪಟ್ಟು ಮದುವೆ ಆಗಿಲ್ಲ ನೀವು
ನಮಗೆ ಯಾವ ಪ್ರೀತಿಯು ಕೊಟ್ಟಿಲ್ಲ ನೀವು .
ಯಾಕೆ ಈಗಾಯ್ತು ಎಂದು ಕೇಳಲು
ನಮಗೆ ತಿಳಿದಿಲ್ಲ ಅಪ್ಪ-ಅಮ್ಮ .
ಮಕ್ಕಳಾಗುವ ತನಕ ನಿಮ್ಮ ಸ್ವಾರ್ಥ ನಿಮ್ಮದು .
ಆದರೆ ನಿಮಗಾಗಿ ನಾವು ಇದ್ದಮೇಲೆ ನಿಮ್ಮ ಪ್ರಪಂಚವೇ ನಾವಾಗಬೇಕಲ್ಲ .
ಇನ್ನು ನಿಮಗಾಗಿ ನೀವಿದ್ದರೆ ನಾವ್ಯಾಕೆ ನಿಮಗೇ ........
ಅಪ್ಪನ ಪ್ರೀತಿ ಅಮ್ಮನ ಅಕ್ಕರೆ
ಎರಡು ಇಲ್ಲ ನಮಗೆ .
ನಾವು ಎಲ್ಲರ ತರ ಮಕ್ಕಳಲ್ಲವೇ
ನಮಗೂ ಎಲ್ಲರಹಾಗೆ ನೂರು
ಆಸೆಗಲಿಲ್ಲವೇ .........
ಇಬ್ಬರ ಸಂತೋಷಕ್ಕೂ ನಾವು
ಪ್ರತಿರೋಪವಾದಾಗ ಒಬ್ಬರೇ
ನಮ್ಮ ಜವಾಬ್ದಾರಿ ಏಕೆ ವಹಿಸಬೇಕು.
ಎಲ್ಲರೂ ಅನ್ನಬಹುದು ಇದು ನಿಮ್ಮ ವಿಧಿ ಬರಹವೆಂದು ಆದರೆ ನಮಗೆ ಗೊತ್ತು ಅದು ನಮ್ಮ ತಂದೆ-ತಾಯಿ ನಮಗಿಟ್ಟ ಶಾಪವೆಂದು.
- ಚುಕ್ಕಿ
02 Apr 2017, 12:25 pm
Download App from Playstore: