ತೊಗಟೆ ಕಳಚುವ ಮುನ್ನ
(ಗಿಬ್ರಾನ್ ಪ್ರೇರಿತ)
ಪ್ರೇಮ ಎಳೆಯಾಗಿ ನಿನ್ನೊಳಗೆ
ಬೆಳೆಯ್ಪಡುತ್ತದೆ
ಕಣ್ಣೀರಾದರೂ ಹಾಕಿ ಪೋಷಿಸು
ಚಿಗುರುವಾಗ ಮುಳ್ಳುಗಳೂ ಬರಬಹುದು
ಕಾಯಲು ಹುಟ್ಟಿವೆಯೆಂದು
ತಿಳಿದುಕೋ..
ಹಗಲು ರಾತ್ರಿ ಮರವಾಗಿ
ಎದುರು ನಿಂತಿರುತ್ತದೆ
ನೆನಪುಗಳ ಕೊಂಬೆಗಳಲ್ಲಿ
ಕನಸುಗಳು ಕಾಯಿಯಾಗುತ್ತದೆ
ಇಗೋ,ಕೆಲವರಿಗೆ ವಿರಹವೆಂಬ
ಬರಗಾಲ ಎರಗುತ್ತದೆ
ಮೌನದ ಬಿಸಿಲು ಅದಕೆ ಕಾರಣವಾಗಿರುತ್ತದೆ
ನೆನಪಿಡು,ಕಳೆಯಂತೆ ಕೆಲವು
ಬೇನಾಮಿ ಬಳ್ಳಿಗಳೂ ಮುತ್ತುತ್ತವೆ
ನಿನ್ನೊಡಲ ಸಾವಧಾನ ಎಡೆಕೊಡಲಿ
ತಪ್ಪಿಲ್ಲ
ಬಳ್ಳಿಯೂ ಹೂ ಬಿಡವುದಾದರೆ
ಎಚ್ಚರವಾಗಿರು,ಘಮಿಸಿ ರಮಿಸಿ
ಏಕಸ್ವಾಮ್ಯ ಮಾಡಿಕೊಳ್ಳಬಹುದು
ಕ್ರಮೇಣ ಒಣತೊಗಟೆಗಳ ಕಳಚಿಬಿಡು
ಬಳ್ಳಿಯೂ ಪಾಶವಾಗದಿರಲಿ
ನೀ ಬೆಳೆಯಲು ನಿನಗೊಬ್ಬ ಒಡೆಯನಿರುತ್ತಾನೆ ಆ ಅಂಗಳದ
ಕೃಷಿ ನೀನಾಗಿರುತ್ತಿ ನೋಡಿಕೋ,
ಎಂದೆಂದೂ ನಿನ್ನನ್ನು ಸಮೃದ್ಧವಾಗಿಸಲು ಆಶಿಸುವವ
ಕೃತಜ್ಞನಾಗಿರು,
ಕತ್ತರಿಸಲು ಬರದಿರುವವರೆಗೂ,
ಎಳೆಯನ್ನು ಚಿಗುರಿಸುವೆಯೋ
ಚಿವುಟಿ ಹಾಕುವೆಯೋ
ಅಂತಿಮ ತೀರ್ಮಾನ ನಿನ್ನದೇ
ದೇವರು ನನ್ನ ಪರವಾಗಿ ಚಿಂತಿಸಲು
ದಾರಿ ತೋರಲಿ..
*ಅವಿಜ್ಞಾನಿ*
- ಅವಿಜ್ಞಾನಿ
02 Apr 2017, 02:43 pm
Download App from Playstore: